Skip to main content

Posts

ಪಶ್ಚಿಮವಾಹಿನಿ ನದಿಗಳ ಮಾಹಿತಿ

ಕರ್ನಾಟಕದ ಪಶ್ಚಿಮವಾಹಿನಿ ನದಿಗಳು (ಅವುಗಳ ಉಗಮಸ್ಥಾನ ಮತ್ತು ಸೇರುವ ಸಾಗರ ಸಹಿತ) 1. ಶರಾವತಿ ನದಿ ಉಗಮ: ಅಂಬುತೀರ್ಥ, ತೀರ್ಥಹಳ್ಳಿ ತಾಲ್ಲೂಕು (ಶಿವಮೊಗ್ಗ ಜಿಲ್ಲೆ) ಸೇರುವುದು: ಅರಬ್ಬೀ ಸಮುದ್ರ (ಹೊನ್ನಾವರ ಬಳಿ) 2. ಕಾಳಿ ನದಿ ಉಗಮ: ಡಾಂಡೇಲಿ ಸಮೀಪದ ದಿಗಿ ಬೆಟ್ಟ, ಉತ್ತರ ಕನ್ನಡ ಸೇರುವುದು: ಅರಬ್ಬೀ ಸಮುದ್ರ (ಕರವಾರ ಬಳಿ) 3. ಗಂಗಾವಳಿ ( ಬೇಡ್ತಿ) ನದಿ  ಉಗಮ ಸ್ಥಾನ: ಬೇಡ್ತಿ ನದಿಯು ಪಶ್ಚಿಮ ಘಟ್ಟಗಳಿಂದ ಉಗಮವಾಗುತ್ತದೆ. ನಿರ್ದಿಷ್ಟವಾಗಿ, ಇದು ಧಾರವಾಡ ಜಿಲ್ಲೆಯ ಸೋಮೇಶ್ವರ ದೇವಸ್ಥಾನದ ಸಮೀಪ ಹುಟ್ಟುತ್ತದೆ.  ಸೇರುವುದು: ಅರಬ್ಬೀ ಸಮುದ್ರ (ಗಂಗಾವಳಿ ಕಡೆಯಿಂದ) 4. ಅಘನಾಶಿನಿ ನದಿ ಉಗಮ: ಸಿರ್ಸಿ ಪ್ರದೇಶದ ಶಂಕರಹೊಂಡ (ಸೋಮಗಿರಿ ಬೆಟ್ಟ) ಸೇರುವುದು: ಅರಬ್ಬೀ ಸಮುದ್ರ (ಕುಮಟಾ ಬಳಿ) 5. ವೇಣ್ಗಂಗಾ (ವೇಣುಗೋಪಾಲ) / ವೇಣ್ಗಂಗಾವಳಿ ನದಿ ಉಗಮ: ಉತ್ತರ ಕನ್ನಡ ಜಿಲ್ಲೆ ಸೇರುವುದು: ಅರಬ್ಬೀ ಸಮುದ್ರ 6. ನೇತ್ರಾವತಿ ನದಿ ಉಗಮ: ಗಂಗಮೂಲ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿ ಸೇರುವುದು: ಅರಬ್ಬೀ ಸಮುದ್ರ (ಮಂಗಳೂರು ಬಳಿ) 7. ಗುರುಪುರ ನದಿ ಉಗಮ: ಪಶ್ಚಿಮಘಟ್ಟದ ಬಂಗ್ರಾಪಾಡಿ ಬೆಟ್ಟ (ಕರ್ಕಳ ತಾಲೂಕು) ಸೇರುವುದು: ಅರಬ್ಬೀ ಸಮುದ್ರ (ಮಂಗಳೂರು ಬಳಿ) 8. ಕುಮಾರಧಾರಾ ನದಿ ಉಗಮ: ಪುಷ್ಪಗಿರಿ ಬೆಟ್ಟ (ಸುಬ್ರಹ್ಮಣ್ಯ ಪ್ರದೇಶ) ಸೇರುವುದು: ಅರಬ್ಬೀ ಸಮುದ್ರ (ಮಂಗಳೂರಿನಲ್ಲಿ ನೆತ್ರಾವತಿಯೊಂದಿಗೆ) 9. ಸೀತಾನದಿ ಉಗಮ: ಬ್ರಹ್...

ತಿಳಿಯೋಣಾ

> ಪ್ರಾಚಿನ ಕಾಲದಿಂದಲೂ ನಮ್ಮ ದೇಶವನ್ನು 'ಭಾರತ' ಎಂಬುದಾಗಿ ಕರೆಯಲಾಗುತ್ತಿತ್ತು > ದೇಶಕ್ಕೆ ಭಾರತ ಎಂಬ ಹೆಸರು ವೃಷಭನಾಥನ ಹಿರಿಯ ಮಗ 'ಭರತ' ನೆಂಬ ಓರ್ವ ರಾಜನಿದ್ದ > ಭರತನು ಆಳಿದ ನಾಡು 'ಭರತ ಖಂಡ', 'ಭರತವರ್ಷ' (ಭಾರತ ದೇಶ) ಎನಿಸಿತು > ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ' ಪರ್ಷಿಯಾ' ದೇಶದ ಜನರು ಸಿಂಧೂ ನದಿ ಬಯಲಿನ ಸಂಪರ್ಕಕ್ಕೆ ಬಂದರು > ಪರ್ಷಿಯನ್ನರು ಸಿಂಧೂನದಿಯನ್ನು 'ಹಿಂದೂ' ಎಂದು ಕರೆದರು > ಮುಂದೆ ಗ್ರೀಕರು ಭಾರತೀಯರೊಂದಿಗೆ ಸಂಪರ್ಕಕ್ಕೆ ಬಂದಾಗ ಅವರ ಬಾಯಲ್ಲಿ 'ಹಿಂದೂ' ಪದವು 'ఇండు' ఆయతు > ಹಾಗೆಯೇ ಸಿಂಧೂ ನದಿಯು ' ಇಂಡಸ್ ' ಆಯಿತು > ಮಹಮ್ಮದೀಯರ ಆಕ್ರಮಣದೊಂದಿಗೆ 'ಹಿಂದೂ' ಪದವು ಮತ್ತೆ ಬಳಕೆಗೆ ಬಂದಿತು > ಸಂಸ್ಕೃತ ಭಾಷೆಯ ನುಡಿಗಟ್ಟು 'ಅದ್ಭುತ' ಎಂದು ನುಡಿದವರು 'ವಿಲಿಯಂ ಜೋನ್ಸ್ ಜೂನಿಯರ್' > ಶನ ಅಥವಾ ಸೊನ್ನೆಯನ್ನು 'ಮೊಟ್ಟ ಮೊದಲ ಬಾರಿಗೆ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ > ಭೂಮಿ ಗುಂಡಾಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ 'ಆರ್ಯಭಟ' ತೊರಿಸಿಕೊಟ್ಟರು > ಆಧುನಿಕ ವಿಜ್ಞಾನದಲ್ಲಿ ಈ ವಾದವನ್ನು ಎತ್ತಿ ಹಿಡಿದ ಕೀರ್ತಿ ಸಲ್ಲುವುದು 'ಕೋಪರ್ನಿಕಸ್' ಗೆ > ಭಾರತೀಯರು ನಾವ...

ಗಾಂಧಿ ಕನ್ನಡಕ ತೆಗೆಯಬಾರದಿತ್ತು By ಆನಂದ ಮಾಲಗಿತ್ತಿಮಠ

ಕಸವನು ಹಸಿ ಒಣವೆಂದು ವಿಂಗಡಿಸಲಾರದವರು ಅದೆಷ್ಟು ಸುಲಭವಾಗಿ ಮನಸ್ಸುಗಳ ವಿಂಗಡಿಸಿಬಿಡುತ್ತಾರೆ ಬಳಸಿ ಡಸ್ಟ ಬಿನ್ ಗೂ ಎಸೆದು ಬಿಡುತ್ತಾರೆ ಕಸಪೊರಕೆಗೂ ಧರ್ಮದ ಅಮಲೇರಿರಬಹುದು ಕೆಲವ ಗುಡಿಸಿ ಕೆಲವ ಪೋಷಿಸಿ ಹೊರಟಿದೆ ಬೀದಿಯಲಿ ಡಸ್ಟಬಿನಗಳೂ ಸದ್ದು ಮಾಡುತಿವೆ ವಿಪರೀತ ಬಹುಶಃ ಚುನಾವಣೆ ಹತ್ತಿರ ಬಂದಿರಬಹುದು  ಹಸಿದ ಮೇಕೆಯೊಂದು ನೇತಾರನ ಕೊರಳ ಮಾಲೆಯ ತಿಂದು ಜೈ ಎನುತಿದೆ  ಉದರ ಹೊರೆದ ಖುಷಿಯಲಿ ನೋಟಿನ ಮೇಲಿರುವ ಗಾಂಧೀ‌ ಕಣ್ಣಲ್ಲಿ  ನೀರು ಜಿನುಗುತ್ತಿದೆ ಬಹುಶಃ ಸುತ್ತಲಿನ ಕಸದ ಕಣವೊಂದು ಬಿದ್ದಿರಬಹುದು ಗಾಂಧಿ ಕನ್ನಡಕ  ತೆಗೆಯಬಾರದಿತ್ತು ಸ್ವಾತಂತ್ರ್ಯದ ಹೆಸರಿನಲ್ಲಿ

ಓಕುಳಿ ಶೃಂಗಾರ ಹನಿಗಳು @ ಆನಂದ ಮಾಲಗಿತ್ತಿಮಠ

ಅವಳು ಕೆನ್ನೆಯ ಪಕಳೆಗಳಿಗೆ ನಾ ಹಚ್ಚಿದ ಬಣ್ಣವನು ತೊಳೆದುಕೊಂಡಳು ಈಗ ತುಟಿಗಳನು ನೋಡಿಕೊಳ್ಳುತ್ತಿದ್ದಾಳೆ ತುಟಿಯಿಂದ ತುಟಿಗೆ ತೀಡಿದ ರಂಗು ಹೋಗುವುದಾರೂ ಹೇಗೆ? *** ಅವಳು ತೊಟ್ಟ ಸೀರೆಯ ಬಣ್ಣಗಳ ಎಣಿಸುತ್ತಾ ಎಳೆಯುವಾಗ ಸಮಯ ಸರಿದಿದ್ದೆ ತಿಳಿಯಲಿಲ್ಲ ಅಷ್ಟರಲ್ಲಿ ಬಣ್ಣದಾಟ ಮುಗಿದು ಕಾಮ ದಹನವಾಗಿತ್ತು *** ನನ್ನ ಬಿಸಿ ಉಸಿರ ಪರಿಮಳ ತೊಟ್ಟು ಅವಳು ಕೆಂಡ ಸಂಪಿಗೆಯಂತಾದಳು ಅವಳ ಕೆಂಬಣ್ಣ ಮುಗಿಲಿಗೆರಚಿ ಬೇಗ ಸಂಜೆಯಾಗಲೆಂದು ಕಾಯುತ್ತಿದ್ದೇನೆ *** ನನ್ನ ನೋಡಿ ಅವಳು ನಾಚಿ ನೀರಾದಳು ಅವಳೊಳಗೆ ಒಲವ ಬಣ್ಣ ಬೆರೆಸಿ ಓಕುಳಿಯಾಡಿದೆ *** ಬಣ್ಣ ಹಚ್ಚಬೇಡ ಬಣ್ಣ ಹಚ್ಚಬೇಡ ಎನುತಲೇ ಮೈಮೇಲೆ ಬಿದ್ದಳು ನಾನು ಬಿಳಿಯ ಬೆಳಕು ಅವಳೊಳಗೆ ತೂರಿ ಹೊರಬಂದೆ ಅವಳ ಮಡಿಲಲ್ಲೀಗ ಪುಟಾಣಿ ಕಾಮನಬಿಲ್ಲು ಆಡುತಿದೆ *** ನನ್ನ ಪ್ರೀತಿಯ ತಿರಸ್ಕರಿಸಿ ನಡೆದ ಅವಳ ಬೆನ್ನ ಮಹಡಿಯಿಂದ ನಾ ಹಚ್ಚಿದ ಕೊನೆಯ ಬಣ್ಣದ ಹನಿಯೊಂದು  ವಿರಹದಿಂದ ನೆಲಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದೆ *** ಕಪ್ಪು ಬಣ್ಣವೆಂದರೆ ಅವಳಿಗೂ ಇಷ್ಟ ಕಣ್ಣಿಗೆ ಕಾಡಿಗೆ ಹಾಕುತ್ತಾಳೆ ನಾನೋ  ಕಪ್ಪು ಹಲಗೆಯ ಮೇಲೆ ಅವಳ ಕಣ್ಣುಗಳನೇ ಬರೆಯುತ್ತೇನೆ ಅವಳ ತಂದೆಗೂ  ಕಪ್ಪೆಂದರೆ ಇಷ್ಟ ನಮ್ಮಿಬ್ಬರ ಒಲವ ಸುಟ್ಟ ಬೂದಿ  ಕಪ್ಪ ಕೇಳುತ್ತಿದ್ದಾನೆ ಹೇಗೆ ಕೊಡಲಿ? *** ಅವಳ ಪ್ರತಿ ಹೆಜ್ಜೆಗಳಿಗೂ ಬಣ್ಣ ತುಂಬುತ್ತಾ ಹೋದೆ ಅವಳದಕೆ ಕನಸುಗಳೆಂದು ಹೆಸರಿಟ್ಟಳು ನನಸಾದ  ಮೇಲೆ ಅವ...

ತಾಳ ತಪ್ಪಿದ ಸಾಹಿತ್ಯ ಮತ್ತು ಮಕ್ಕಳ ಮೇಲಿನ ಪ್ರಭಾವ @ ಆನಂದ ಮಾಲಗಿತ್ತಿಮಠ

ಸಾಮಾಜಿಕ ಹಿತವನ್ನು ಬಯಸುವುದೇ ಸಾಹಿತ್ಯವಾಗಬೇಕು. ಲೋಕದ ತವಕ ತಲ್ಲಣಗಳನ್ನೆಲ್ಲಾ ಹೊದ್ದು ಹರಿಯುವ ರಸಗಂಗೆಯಾಗಬೇಕು. ಪ್ರಶ್ನಿಸಬೇಕು ಮತ್ತು ಪ್ರಶ್ನೆಗಳಿಗೆ ಉತ್ತರವಾಗಿರಬೇಕು. ಬಿರಿದ ಹೃದಯಗಳನೊಂದುಗೂಡಿಸುವಂತಿರಬೇಕು. ಸೋತವರ ರೆಟ್ಟೆಗಳಿಗೆ ಬಲತುಂಬಿ ಯಶಸ್ಸಿನೆಡೆಗೆ ಕೈ ಹಿಡಿದು ಕರೆದುಕೊಂಡು ಹೋದ ಅದೆಷ್ಟೋ ಸತ್ವಯುತ ಸಾಹಿತ್ಯ ಪುಸ್ತಕದ ಉದರಗಳಲಿ ಮಿಸುಕಾಡುತ್ತಿದೆ. ಸಾಹಿತ್ಯದಲ್ಲಿ ಹಲವು ಪ್ರಕಾರಗಳಿದ್ದರೂ ಜಾನಪದ ಸಾಹಿತ್ಯದಷ್ಟು ಹೃದಯಕ್ಕೆ ಹತ್ತಿರವಾದುದು ಮತ್ತೊಂದಿಲ್ಲ.  ಕೃತಕತೆಯ ಬಣ್ಣಗಳಿಲ್ಲದ ನಿರಾಭರಣ ಸುಂದರಿ ಎಂದರೆ ಅದು ಜನಪದ ಸಾಹಿತ್ಯ. ಆದರೆ ಇತ್ತೀಚಿನ ದಿನಮಾನಗಳಲಿ ಹೊಸ ಸಾಹಿತ್ಯವೊಂದು ಜನ್ಮತಳೆದಿದೆ. ಅದುವೆ ಟ್ರ್ಯಾಕ್ಟರ್ ಸಾಹಿತ್ಯ. ಎತ್ತುಗಳೊಂದಿಗೆ ರೈತನ ಸಾಂಗತ್ಯವಿದ್ದಾಗ ಬೆವರಿನೊಂದಿಗೆ ಹುಟ್ಟಿದ ಪದಗಳು ಲೋಕಕೆ ನೀತಿ ಸಾರುವಂತಿದ್ದವು. ಆದರೆ ಟ್ರ್ಯಾಕ್ಟರ್ ಅರಚುವ ಇಂದಿನ ಹಾಡುಗಳಲ್ಲಿ ಅಶ್ಲೀಲತೆಯ, ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಹಾಡುಗಳ ವಿಜೃಂಭಣೆಯು ಸಾಗಿದೆ. ಇಂತಹ ಹಾಡುಗಳು ಬಲುಬೇಗ ಜನಪ್ರಿಯವಾಗುತ್ತಿರುವುದು ಉಳಿದವರಿಗೆ ಇಂತಹುದೇ ಹಾಡುಗಳನು ಮತ್ತೆ ಮತ್ತೆ ಬರೆದು ಹಾಡುವಂತೆ ಪ್ರೇರೆಪಿಸುತ್ತಿದೆ. ಹದಿಹರೆಯದ ಮಕ್ಕಳಲ್ಲಿ ಇಂತಹ ಸಾಹಿತ್ಯವು ಬೀರುತ್ತಿರುವ ಪರಿಣಾಮ ಗಂಭೀರವಾಗಿದೆ. ಕೋಮಲತೆಯಿಂದ ಅರಳಿ ನಗಬೇಕಾದ ಮಲ್ಲಿಗೆ ಹೂವುಗಳಂತಿರುವ ಮಕ್ಕಳ ಮನಸ್ಸಿನಿಂದ ಮುಗ್ಧತೆಯ ಪರಿಮಳವನ್ನೇ ಕಸಿದು ಹಾಕುತ್ತಿರುವ...

ಕವಿಗೋಷ್ಠಿ - ಹಾಸ್ಯ ಲೇಖನ @ ಆನಂದ ಮಾಲಗಿತ್ತಿಮಠ

ಆಗಾಗ ಕವಿಗೋಷ್ಠಿಯಲ್ಲಿ ಭಾಗವಹಿಸುವುದು ನನ್ನ ಹವ್ಯಾಸ. ನನ್ನ ಈ ಹವ್ಯಾಸವೇ ನನ್ನಾಕೆಗೆ ಚಟವಾಗಿ ಕಾಣುತ್ತದೆ ಎಂಬುವುದೇ ವಿಪರ್ಯಾಸ. ಮುಂಜಾನೆ ಅರಳಿದ ಹೂವಿನ ಮುಖದಲ್ಲಿರುವ ಉತ್ಸಾಹವೆ ಕವಿಗೋಷ್ಠಿಗೆ ಹೋಗುವ ಮುನ್ನ ನನ್ನಲ್ಲಿರುತ್ತದೆ. ಅದನ್ನು ಮುಗಿಸಿ ಬರುವಾಗ ಥೇಟ್ ಬಾಡಿದ ಹೂವು.       ನಮ್ಮಲ್ಲಿ ಮಹಾನವಮಿ ಬಂತೆಂದರೆ ಸಾಕು ಮನೆ ಸ್ವಚ್ಚತೆಯ ಕಾರ್ಯ ನಡೆಯುತ್ತದೆ. ಅದರಲ್ಲಿ ಹಾಸಿಗೆ ಒಗೆದು ಹಾಕುವ ಪರಿ ನೋಡಬೇಕು. ಥೇಟ್ ಒನಕೆ ಓಬವ್ವನಂತೆ ವೀರಗಚ್ಛೆಯನು ಹಾಕಿ ಹೆಣ್ಣು ಮಕ್ಕಳು ಹಾಸಿಗೆಯ ಒಂದು ತುದಿ ಹಿಡಿದರೆ ಅವರ ಗಂಡಂದಿರು ಇನ್ನೊಂದು ತುದಿ. ಯಾವ ಜನುಮದ ಸೇಡೋ ಎನ್ನುವಂತೆ ತಿರು ತಿರುವಿ ಕಲ್ಲಿಗೆ ಹಾಸಿಗೆ ಜಾಡಿಸುತ್ತಿದ್ದರೆ ಅದರೊಳಗಿನ ಕೊಳೆ ಸತ್ತನ್ಯೊ.. ಎಪ್ಪಾ..! ಎಂದು ಜಾಗ ಖಾಲಿ ಮಾಡುತ್ತದೆ.          ಇದೇನು ವಿಷಯಾಂತರ ಎಂದುಕೊಂಡಿರಾ? ಖಂಡಿತ ಅಲ್ಲ. ಕೆಲವು ಕವಿಗೋಷ್ಠಿಯಲ್ಲಿ ನಮ್ಮ ಮೆದುಳು ಕವಿಗಳ ಕೈಗೆ ಸಿಕ್ಕ ಮಹಾನವಮಿ ಹಾಸಿಗೆಯಂತೆ, ಜಾಡಿಸಿ ಜಾಡಿಸಿ ಬರಿ ಕೊಳೆ ತೆಗೆಯುವುದಿಲ್ಲ. ಜೀವಾನೇ ಹಿಂಡಿ ಬಿಡುತ್ತಾರೆ.             ಒಂದು ಬಾರಿ ಜಾತ್ರಾ ಕಮೀಟಿಯವರು ಕವಿಗೋಷ್ಠಿಯನ್ನು ಏರ್ಪಡಿಸಿದ್ದರು. ಕವಿಗೋಷ್ಠಿಯ ಸಮಯ ಸಾಯಂಕಾಲ ಆರು ಗಂಟೆ ಎಂದಿತ್ತು. ಕವಿ ಮಹಾಶಯರೆಲ್ಲರೂ ಸಮಯಕ್ಕೆ ಸರಿಯಾಗಿ ಬಂದಿದ್ದರೂ ಕಾರ್ಯಕ್ರಮದ ಸಿದ್ಧತೆ ಇನ...

ಭಾರತದ ಸಂವಿಧಾನದಲ್ಲಿರುವ ವಿಧಿಗಳು

ಭಾಗ 1 ಸಂಘ ಮತ್ತು ಸಂಘಕ್ಷೇತ್ರ ಅನುಚ್ಛೇದ1: ಸಂಘದ(ರಾಜ್ಯದ)ಹೆಸರು ಮತ್ತು ರಾಜ್ಯಕ್ಷೇತ್ರ ಅನುಚ್ಛೇದ2: ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ ಅನುಚ್ಛೇದ2ಎ: ನಿರಸನಗೊಳಿಸಲಾಗಿದೆ ಅನುಚ್ಛೇದ3: ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ರಾಜ್ಯಗಳ ಪ್ರದೇಶಗಳ, ಸರಹದ್ದುಗಳ ಅಥವಾ ಹೆಸರುಗಳ ಬದಲಾವಣೆ ಅನುಚ್ಛೇದ4: 2ನೇ ಮತ್ತು 3ನೇ ಅನುಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು ಮೊದಲನೆಯ ಮತ್ತು ನಾಲ್ಕನೇ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಮತ್ತು ಪೂರಕ, ಪ್ರಾಸಂಗಿಕ ಮತ್ತು ಅನುಷಂಗಿಕ ವಿಷಯಗಳ ಬಗ್ಗೆ ಉಪಬಂಧವನ್ನು ಕಲ್ಪಿಸುವುದು.

ಗೋಡೆ @ ಆನಂದ ಮಾಲಗಿತ್ತಿಮಠ ಕವಿತೆ

ಒಂದು ಸಹಾಯ ಮಾಡಿ ಬಡ ಗೋಡೆಯೆಂದು ಹೊರಡಬೇಡಿ ನಡು ಬಾಗಿದರೂ ತೊಲೆ ಹೊತ್ತು ನಿಂತಿರುವೆ ಮುದಿಯೆಂದು ತೆಗಳಬೇಡಿ ಮೈತುಂಬ ಮದರಂಗಿ ಕೆಂಪು ಗಾಯಗಳು ಸಮರದ ಗುಂಡು ತಾಗಿದುದಲ್ಲ ಕಲೆತವರ ಉಳಿಯೇಟಿನ ಕಲೆಗಳವು ಕಲೆಗಾರರು ಚಿತ್ರಿಪ ಸುಂದರ ಶಿಲ್ಪಗಳಲ್ಲ ಸಿಗರೇಟಿನ ಮೋತಿ ನೀಡಿದ ಮುತ್ತುಗಳು ಕನ್ಯೆಯ ಕೆನ್ನೆಗಿಟ್ಟ ದೃಷ್ಠಿ ಬೊಟ್ಟುಗಳಲ್ಲ ಸುಟ್ಟ ಮನದ ಸೋರು ಛಾವಣಿ ಹನಿಗಳು ಕರುಣೆ ಪಡೆಯಲು ಮಾಡಿದ ಪಟ್ಟುಗಳಲ್ಲ ತಾಂಬೂಲು ತಿಂದುಗಿದ ಚಿತ್ತಾರಗಳು ಪಾತಿರ್ವತೆಯ ಕೆಂಪು ಸಿಂಧೂರವಲ್ಲ ಸಾರಾಯಿ ಅಮಲಿನಲಿ ಕಕ್ಕಿದ ಅನ್ನದಗುಳು ಅಂಗಳದಲಿಟ್ಟ ಶುಭ ರಂಗೋಲಿಯಲ್ಲ ಒಂದು ಸಹಾಯ ಮಾಡಿ ನಾನು ಸರ್ಕಾರಿ ಶಾಲೆ ಗೋಡೆ ನಿಲ್ಲಿಸಿಬಿಡಿ ಇಂತಹ ಅತ್ಯಾಚಾರ

ಅವ್ವ ಮತ್ತು ಆಲದಮರ @ ಶಿವಾನಂದ ಉಳ್ಳಿಗೇರಿ

    ಶಿವಾನಂದ ಉಳ್ಳಿಗೇರಿ ಅವರ ಅವ್ವ ಮತ್ತು ಆಲದ ಮರ ಕವನ ಸಂಕಲನವು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಅಂದದ ಮುಖಪುಟ ವಿನ್ಯಾಸ ಹಾಗೂ ಒಳಪುಟಗಳಲ್ಲಿ ಚಂದನೆಯ ಚಿತ್ರಗಳು ಓದುಗರ  ಮನಸೆಳೆಯುತ್ತವೆ. ಅವ್ವನ ಮೇಲಿರುವ ಅವರ ಅತಿಯಾದ ಪ್ರೀತಿಯು ಕಾವ್ಯ ರೂಪವನ್ನು ಪಡೆದಿದೆ.    ಶಿವಾನಂದ್ ಉಳ್ಳಿಗೇರಿ ಅವರ ಬಹಳಷ್ಟು ಕವಿತೆಗಳಲ್ಲಿ ತಮ್ಮನ್ನು ತಾವೇ ಸಂತೈಸಿಕೊಂಡು ಸಾಗುವ, ಬದುಕಿಗೆ ಪ್ರೇರಣೆ ಆಗಬಲ್ಲ, ಬದುಕಿನ ಬಗ್ಗೆ ಆಶಾಕಿರಣ ಮೂಡಿಸಬಲ್ಲ ಸಾಲುಗಳನ್ನು ಬರೆದಿದ್ದಾರೆ. ಕವಿಯ ಹೃದಯದ ತುಮುಲಗಳನ್ನು ಅವರ ಅವ್ವ ಮತ್ತು ಆಲದ ಮರ ಕಾವ್ಯ ಸಂಕಲನದಲ್ಲಿ ಕಾಣಬಹುದು. ಒಮ್ಮೆ ಬರಗಾಲಕ್ಕೆ ಕವಿಯ ಹೃದಯ ಮರುಗಿದರೆ ಮತ್ತೊಮ್ಮೆ ಬಿರುಸಾಗಿ ಸುರಿಯುವ ಮಳೆಯ ಕುರಿತು ಅವರ ಭಾವ ಕಾವ್ಯ ಝರಿಯಾಗಿ ಹರಿಯುತ್ತದೆ.     ಪ್ರೀತಿ ಇಲ್ಲದೆ  ಕವಿತೆ ಸಾಧ್ಯವಿಲ್ಲ ಎನ್ನುವಂತೆ ಪ್ರಸ್ತುತ ಸಂಕಲನದಲ್ಲಿ ತಮ್ಮ ಪ್ರೇಯಸಿಯನ್ನು  ನೆನಪಿಸಿಕೊಳ್ಳದೆ, ಅವಳ ಸುತ್ತ ಕವಿತೆ ಕಟ್ಟದೆ ಇರಲಾಗದೆ ಶಿವಾನಂದರವರು ಸಹಜವಾಗಿಯೇ ಪ್ರೀತಿಯ ಸಾಲುಗಳನ್ನು ಬರೆಯುತ್ತಾರೆ. ಅವ್ವನ ರೂಪವೇ ಅಕ್ಕ ಎನ್ನುವುದನ್ನು ಅವರು ಕವಿತೆಯಲ್ಲಿ ಅಕ್ಕನ ಜೊತೆ ಒಡನಾಡಿದ ಸಂದರ್ಭಗಳನ್ನು ಸೆರೆಹಿಡಿಯುತ್ತಾರೆ. ಅಪ್ಪನ ಪ್ರೀತಿಯಿಂದ ವಂಚಿತರಾದ  ತಮ್ಮ ಮನದ ಆರ್ತನಾದವನ್ನು ಅಪ್ಪ ಎಂಬ ಕವಿತೆಯಲ್ಲಿ ಓದುಗರ ಎದೆಗೆ ಆಪ್ತವಾಗಿ ಇಳಿಸಿ ಬಿಡುತ್ತ...

ನನ್ನವರು@ ಆನಂದ ಮಾಲಗಿತ್ತಿಮಠ 'ಗಜಲ್'

ಆ ಮುಳ್ಳು ಅಮಾಯಕತೆಯ ಪ್ರತೀಕ ಬಿಡಿ ಚುಚ್ಚಿದ್ದು ನನ್ನವರೆ. ಆ ಚಿನ್ನದ ಕತ್ತಿಯದೇನೂ ತಪ್ಪಿರಲಿಲ್ಲ ಬೆನ್ನಿಗಿರಿದಿದ್ದು ನನ್ನವರೆ. ನಂಬಿಕೆಯ ಅರಮನೆ ಸುಡುತಿರಲು ಕರಿ ಬೂದಿಯ ಕಲರವ ಕಣ್ಣೀರು ಸುರಸಿ ನಂದಿಸಲು ಬರಬೇಡಿ ಸುಟ್ಟಿದ್ದು ನನ್ನವರೆ. ಸ್ನೇಹದ ಪರಿಮಳದಲ್ಲಿ ಕೊಳೆತ ಶವದ ವಾಸನೆಯು ಬೆರೆತಿದೆ ಅದು ಮೋಸವೆಂದು ಚಿತ್ಕರಿಸಿ ಸಾರಬೇಡಿ ಮಾಡಿದ್ದು ನನ್ನವರೆ. ಗಾಜಿನ ಮನಸ್ಸಿಗೆ ಒಡೆವ ಕಲ್ಲಿನ ಮೇಲೆಯೆ ಮೋಹ ಜಾಸ್ತಿ ತಾಗಿದರೂ ಚುಂಬನವೆಂದು ತಿಳಿದುಬಿಡಿ ಎಸೆದದ್ದು ನನ್ನವರೆ. ಮೈಮರೆತು ಮಲಗಿದರೂ ಸಮಾಧಿಯೆಳೆದು ಶೋಕಿಸುತ್ತಾರಿಲ್ಲಿ  ಮುಖವಾಡಗಳನು ದೂರುತ್ತಿಲ್ಲ ಅಥರ್ವಾ ತೊಟ್ಟಿದ್ದು ನನ್ನವರೆ

ಗಝಲ್ @ ಆನಂದ ವೀ ಮಾಲಗಿತ್ತಿಮಠ

ಮಣ್ಣು ಹೊತ್ತ ಹೆಗಲಿಗಂದು ಸುರಿಸಿದ ಬೆವರು ಗೊತ್ತಿತ್ತು ಉರಿದ ಕಣ್ಣಿಗಂದು ಧೂಳುದುರಿ ಹರಿದ ‌ಕಣ್ಣೀರು ಗೊತ್ತಿತ್ತು ಇಟ್ಟಿಗೆಗಳ ಜೋಡಿಸುವಾತನು ಬರೀ  ಗೋಡೆಯನು ಕಟ್ಟಿದ ಮೂಢನಿಗಲ್ಲಿ ಮೂಡಿ ಬಂದ ಆಕಾರದ ಹೆಸರು ಗೊತ್ತಿತ್ತು ದಣಿದು ತಾ ಕುಣಿದು ಉಳಿಯು ಮೂಡಿಸಿದ್ದು ಶಿಲ್ಪಚಿತ್ತಾರ ಕಿಡಿಹಾರಲಲ್ಲೂ ಚಳಿಕಾಯಿಸುವ ಜನ ಮೂಳರು ಗೊತ್ತಿತ್ತು ಮಂದಿರವೋ ಮಸೀದಿಯೋ ಮತ್ತೊಂದೋ ಏನಿದೆಯೋ ಗೋಡೆಯ ಗೂನು ಬೆನ್ನಿಗಲ್ಲಿ ಹೊರುವ ತೊಡರು ಗೊತ್ತಿತ್ತು ಮತ್ತೆ ಮತ್ತೆ ಹಳೆಯ ಗೋಡೆಗಳ ಗೊಡವೆಯೇಕೆ 'ಅಥರ್ವಾ' ಗುಂಬಜಕ್ಕೂ ಅಂಬುಜಕ್ಕೂ ಭಾವವೊಂದೇ 'ದೇವರು' ಗೊತ್ತಿತ್ತು

ಸೂಟ್ ಕೇಸ್ @ ಆನಂದ ಮಾಲಗಿತ್ತಿಮಠ ಕತೆ

   ಯಾಕೆ ರಮ್ಯಾ ಹಿಂಗ ಸಿಡಕ್ತಾಯಿದಿಯಾ? ಕುತೂಹಲದಿಂದ ಪ್ರಶ್ನಿಸಿದಳು ಕವಿತಾ.    ನಾನೆಂದರೇನು? ನನ್ನ ಸ್ಟೇಟಸ್ ಅಂದರೇನು? ಚಿಟಿಕೆ ಹೊಡೆದ್ರೆ ಹತ್ತಾರು ಆಳುಗಳು ನಡುಬಗ್ಗಿಸಿ ನಿಲ್ತಾವೆ. ಒಂದು‌ ಸಣ್ಣ ಮುಗುಳ್ನಗೆಗೆ ನೂರಾರು ಹುಡುಗರು ಗುಲಾಮರಾಗಿ ಶರಣಾಗ್ತಾರೆ...ಅಂತಹುದರಲ್ಲಿ ಆ ಸಂಜಯ್ ನನ್ನ ನೋಡಿದ್ರೂ ನೋಡದಂತೆ ಹೋಗ್ತಾನಲ್ಲಾ ಕೊಬ್ಬು ಆತನಿಗೆ..ನಾನೂ ನೋಡ್ತೇನಿ ಎಷ್ಟ ದಿನಾ ಮುಖಾ ತಿರುಗಿಸಿ ಹೋಗ್ತಾನೋ ಎಂದು ಕೋಪದಿಂದ ಕೆಂಪೇರಿದ ಕೆನ್ನೆಯ ಹುಡುಗಿ ರಮ್ಯಾ ನುಡಿದಳು. ****** ಸಂಜಯ್ ಪಾಪ..ಮಿಡ್ಲ ಕ್ಲಾಸು ಹುಡುಗ. ವಯಸ್ಸಲ್ಲಿ ಲವ್ ಮಾಡಬೇಕು ಅಂದ್ರೆ ದುಡ್ಡಿರಲಿಲ್ಲ. ದುಡ್ಡಿದ್ದಾಗ ವಯಸ್ಸಿರಲಿಲ್ಲ. ಹಾಗೂ ಹೀಗೂ ಅವರಪ್ಪ ಕಷ್ಟಪಟ್ಟು ಡಿಗ್ರಿ ಓದಿಸಿದ್ದರು. ಯಾರೋ _"ಲೇ ಸಂಜ್ಯಾ ಕಾಂಪಿಟೇಟಿವ್ ಎಕ್ಸಾಂ ಕಟ್ಟಲಾ ಏನಾದ್ರೂ ಗೌರ್ಮೆಂಟು ಜಾಬ್ ಆದರೆ ಜೀವನಾ ಸುಧಾರಸ್ತದ" ಅಂದರು. ಈತನೋ ಕಟ್ಟಿಯೇ ಕಟ್ಟಿದ...ಒಂದರ ಮೇಲೆ ಒಂದು. ಎಲ್ಲದರಲ್ಲೂ ಗೋತ. ಈ ಕಾಂಪಿಟೇಟಿವ್ ಎಕ್ಸಾಂ ಕಟ್ಟೋ ರೊಕ್ಕದಾಗ ಎರಡ ಚುಲೋ ಮೂಡಲಗಿ ಎಮ್ಮಿ ಕಟ್ಟಬಹುದಾಗಿತ್ತು, ನಾಕ ಕಾಸ ಆದರೂ ಸಂಪಾದನೆಯಾಗ್ತಿತ್ತು ನಿನ್ನ ಹೆಣಾ ಎತ್ಲಿ ಎಂದು ಹಡದವ್ವ ಹಲಗಿ ಹೊಡದಂಗ ಬೈದಳು. ಎರಡ ದಿನದಾಗ ಆಕಿಗೆ ಈತ ಹಲಗಿ ಹಚ್ಚಿದ. ಎಲ್ಲಾ ಬಿಟ್ಟ...ಜೊತೆಗೆ ಗಡ್ಡಾನೂ. ಸಹವಾಸ ಕೆಟ್ಟಿತು. ಹಾಸಿಗೆ ಯಾವುದೋ ಹೇಸಿಗೆ ಯಾವುದೋ ಅನ್ನದ ಕುಡಕುಡದ ಸಿಕ್ಕಲ್ಲ...

ಪೈಲ್ವಾನ‌ ಮಾಸ್ತರ್ @ ಸಂದೀಪ ಕುಲಕರ್ಣಿ

ಮಾದಾಪೂರದ ಬೋರೆಗೌಡ್ರು ಊರಿಗೆನೇ ದೊಡ್ಡ ದನಿಗಳು..ತಮ್ಮ ಮಕ್ಕಳನ್ನ ಚೆನ್ನಾಗಿ ಉಗಿತ್ತಿದ್ದರು..ನೋಡರೋ ಆ ಮುದುಕಪ್ಪನ್ನ ಮಕ್ಕಳನ್ನ..ಎಷ್ಟೇ ಬಡತನದಲ್ಲಿದ್ದರೂ ಚೆನ್ನಾಗಿ ತಿಂದು ಕೊಬ್ಬಿದ,ಮಥಿಸಿದ ಗಜಾ ಇದ್ದಂಗ ಇದ್ದರಲ್ಲೋ..ನೀವು ಅದಿರಿ..ಎನ್ ತಿಂದರೂ ಬಡಶುಂಠಿ ಬೇರ ಆಗಿದಿರಲ್ಲೊ..?? ಚಪಾತಿ,ರೊಟ್ಡಿ,ಮುದ್ದೆ,ಗೋದಿ ಪಾಯಸ ಯಾವುದು ನಾಟತಾ ಇಲ್ಲ ನಿಮಗೆ..ನಿಮ್ಮ ಮೊಖಕ್ಕೊಂದು ಉಗಿಯಾ..ಎಂದು ಮಕ್ಕಳನ್ನ ತರಾಟೆಗೆ ತೊಗಿಂಡಿದ್ರು ಊರಗೌಡ್ರು. ಆ ಕಡೆ ಮುದುಕಪ್ಪನ ಮಗ ಮಲ್ಲೇಶ ಒತ್ತಾರೆನೆ ಇದ್ದು ಮೇವು ತಂದಿ ಹೊಳಿ ಕಡೆ ಹೋಗಿ ಒಂದ ಗಂಟೆ ಈಜಾಡಿ ಬಂದು ಗೋದಿ ಪಾಯಸ,ಶೇಂಗಾ ಬೆಲ್ಲ ಎನ ಕೊಟ್ಟಿದ್ದು ಚೆನ್ನಾಗಿ ಚಚ್ಚಿ ಒಳ್ಳೆ ಜವಾರಿ ಎತ್ತಿನ ಮೈಕಟ್ಟನಂಗ ಆಗಿದ್ದ...ಸಾಲಿ ಕಲಿತಿದ್ದು ಟಿ‌ಸಿಎಚ್ ವರೆಗೆ..ಆದರೆ ಕಡಿಮೆ ಅಂಕ ಬಂದಿದ್ದರಿಂದ ನೌಕರಿ ಗಿಟ್ಟಿರಲಿಲ್ಲ..ಹೀಗಾಗಿ ಅಲ್ಲೆ ಇಲ್ಲಿ ನಡಿಯೋ ಕುಸ್ತಿ ಸ್ಪರ್ದೆ ಲಿ ಭಾಗವಹಿಸಿ ಅವರು ಇವರಿಗೆ ಕುಸ್ತಿ ತರಬೇತಿ ಕೊಟ್ಡು ಜೀವನ ಸಾಗಸ್ತಾ ಇದ್ದ..  ಅವನ ಊಟಾ ಮಾಡೋ ಪದ್ದತಿನೂ ಅದ್ಭುತ...ಹಾಲನ್ಯಾಗ ನಾಲ್ಕ ರೊಟ್ಟಿ,ಮೊಸರನ್ಯಾಗ ನಾಲ್ಕ ರೊಟ್ಟಿ,ಮಜ್ಜಗ್ಯಾಗ ನಾಲ್ಕ ರೊಟ್ಡಿ.ಜೊತೆಗೆ ಒಂದ ತಾಟ ಅನ್ನ ಊಟಾ ಮಾಡತಿದ್ದ...ಹಿಂಗ ದೂಸಾ ಕಳದವೂ..ಆದರೂ ನೌಕರಿ ಹತ್ತಲಿಲ್ಲ..       ನೌಕರಿ ನನಗ ಸಿಗೊದಿಲ್ಲ ಅಂತ ಅನ್ನಕೊಂಡು ಬೆಂಗಳೂರಿಗೆ ಬರ್ತಾನೆ ಮಲ್ಲೇಶಪ್ಪ..ಪ್ರಭಾವ...

ಗಝಲ್ @ ಆನಂದ ಮಾಲಗಿತ್ತಿಮಠ

ಆ ಮತ ಈ ಮತವೆಂಬ ಹಂಗೇತಕೋ ಬರಿ ಮತದಾರನಾಗು ಸಾಕು ಪಟವಾಗಿ ಬಾನೆತ್ತರ ನಾನೇರುವೆ ನೀನದಕೆ ಬರಿ ದಾರವಾಗು ಸಾಕು ಚಿಗುರಿ ಹಬ್ಬುತ ನಲಿದು ನನ್ನವರಿಗೆ ನೆರಳಾಗಿ ಅವರೂ ಚಿಗುರಬೇಕು ಬುಡದಲಿ ಬೆವರು ಸುರಿಸುವ ಬಡ ತೊಗಲಿನ ಕೂಲಿಯಾಗು ಸಾಕು ನಾನಾಳುವವನು ಅಳುವುದಿಲ್ಲ ಅತ್ತರದು ಬರಿ ಬಹಿರಂಗದ ನಾಟಕ ಮಹಿಯನೊಡೆಯನಾಗಲು ಮಾಡುವ ಪೂಜೆಗೆ ಬಲಿಯಾಗು ಸಾಕು ಮೈಯೊಣಗಿ ನಾರಿದರೇನು ಕುಶಲವಾಗಿರಲಿ ಕಡೆತನ ತೋರು ಬೆರಳು  ತೇರಿನಲಿ ಸಾಗುವವನು ನಾನು  ಭಾರ ಹೊರುವ ಗಾಲಿಯಾಗು ಸಾಕು ಅರ್ಧರಾತ್ರಿಯಲಿ ಅಥರ್ವನಿಗೆ ಎಚ್ಚರಾಗಿ ಬುದ್ದನಾದರೂ ಚಿಂತೆಯಿಲ್ಲ ಪ್ರಶ್ನಿಸಿ ಪ್ರಬುದ್ಧನಾಗದೇ ನನಗೇ ನೇತಾಡುವ ಬಾವಲಿಯಾಗು ಸಾಕು ಇದನ್ನೂ ಓದಿ ಗಝಲ್ ಯಾರಿಂದ್ಯಾರಿಗೆ ಎಲ್ಲಿಂದೆಲ್ಲಿಗೆ  

ಮಂಜು ಮುಸುಕಿದ ಹಾದಿ @ ವಿದ್ಯಾರೆಡ್ಡಿ

ಶೀಲವಿಲ್ಲದ ಶೀಲಾ, ವಿದ್ಯೆಯಿಲ್ಲದ ಮುಗ್ದೆ ಶೀಲಾ, ಬೆಳ್ಳಗಿರುವುದೆಲ್ಲ ಹಾಲು, ಹೊಳೆಯುವುದೆಲ್ಲಾ ಚಿನ್ನ ಎಂದು ನಂಬಿದ ಶೀಲಾ, ಆಧುನಿಕ ಪ್ರಪಂಚದ ಚಕ್ರವ್ಯೂಹದೊಳಗೆ ಬಂಧಿಯಾದ ಶೀಲಾ....ಶೀಲಾಳ ಕತೆ ಓದುತ್ತಾ ಹೋದಂತೆ ಕಣ್ಣೆವೆಗಳು ಆರ್ದ್ರವಾಗುತ್ತವೆ. ಪ್ರಸ್ತುತ ಲೋಕದ ಕನ್ನಡಿಯಂತೆ ಚಿತ್ರಿತವಾಗಿದೆ ಶ್ರೀಮತಿ ವಿದ್ಯಾರೆಡ್ಡಿಯವರ ಮಂಜು ಮುಸುಕಿದ ಹಾದಿ. ಮಂಜು ಮುಸುಕಿದ ಹಾದಿ ನಮ್ಮೆಲ್ಲರನ್ನೂ ಸುಲಭವಾಗಿ ಓದಿಸಿಕೊಂಡು ಹೋಗುವುದರೊಂದಿಗೆ ಚಿಂತನೆಗೂ ಹಚ್ಚುತ್ತದೆ. ಕಾದಂಬರಿಯ ಪಾತ್ರಗಳು ನಮ್ಮ ಸುತ್ತಲಿನ ವ್ಯಕ್ತಿಗಳಲ್ಲಿಯೇ ಅಂತರ್ಗತವಾಗುತ್ತ ಹೋಗುವುದು ಇದರ ವಿಶೇಷ. ಶ್ರೀಮತಿ ವಿದ್ಯಾರೆಡ್ಡಿಯವರು ಕಾದಂಬರಿಯುದ್ದಕ್ಕೂ ಓದುಗರನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಓದುಗರಿಗೂ ಹಾಗೂ ನಿರೂಪಕರಿಗೂ ಅರಿವಾಗದಂತೆಯೇ ಒಂದು ರೀತಿ ಆಪ್ತತೆ ಬೆಳೆದು ಬಿಡುತ್ತದೆ. ಕಾದಂಬರಿಯ ಕಥಾವಸ್ತುವಿಗೆ ಬರುವುದಾದರೆ ಇಲ್ಲಿ ಶೀಲಾಳ ಜೀವನವೇ ಪ್ರಮುಖವಾಗಿದ್ದು ಕ್ರೌರ್ಯವು ಹೇಗೆ ಮುಗ್ಧತೆಯನ್ನು ಆವರಿಸಿಕೊಳ್ಳುತ್ತಾ ಹೋಗಿ ಕೊನೆಗೆ ಆಹುತಿಯನ್ನು ಪಡೆಯುತ್ತದೆ ಎಂಬುವುದನ್ನು ಕಾಣಬಹುದಾಗಿದೆ. ನರಸಾಪೂರವೆಂಬ ಹಳ್ಳಿಯ ಕುಟುಂಬವೊಂದರಿಂದ ಆರಂಭವಾಗುವ ಕತೆ ಶೀಲಾಳ ಅಪ್ಪನ ಸಾವಿನೊಂದಿಗೆ ಓಘವನ್ನು ಪಡೆದುಕೊಳ್ಳುತ್ತದೆ. ಸ್ವರ್ಗ ನರಕಗಳು ಬೇರಿಲ್ಲ, ಈಗ ಮಾಡಿರುವುದನ್ನು ಇಲ್ಲಿಯೇ ತೀರಿಸಬೇಕು ಎಂಬ ತತ್ವವನ್ನು ನಾವು ಕತೆಯಲ್ಲಿ ಗಮನಿಸಬಹುದು. ಮುಗ್ಧರ ಸುಲಿ...

ಕಠಾರಿಗಢದ ಚಾರಣ

      ದೂರದಿಂದ ಕಾಣುವ ಕೋಟೆಯ ದೃಶ್ಯ   ವಿಜಯದಶಮಿಯ ದಿನ ವಿಜಯಯಾತ್ರೆಗೆ ಸಿದ್ದಗೊಂಡು ಹೊರಟಿದ್ದಾಯಿತು. ಮುರಗೋಡ ಮಾರ್ಗವಾಗಿ ಅದರ ಈಶಾನ್ಯಕ್ಕೆ ಹೊರಳಿದರೆ ಅಲ್ಲಿಂದ 9 ಕಿ.ಮೀ ನಲ್ಲಿ ಕಾಣಸಿಗುವುದೇ ಸುಬ್ಬಾಪೂರ.‌ಸುಬ್ಬಾಪೂರವು ಹಿಂದೆ ಸುಬ್ರಹ್ಮಣ್ಯಪುರವಾಗಿದ್ದು ಕಾಲಾನಂತರದಲ್ಲಿ ಸುಬ್ಬಾಪೂರಾಗಿ ಉಳಿದಿದೆ. ಸುಮಾರು 500 ಜನಸಂಖ್ಯೆಯಿರುವ ಪುಟ್ಟಗ್ರಾಮ. ಈ ಗ್ರಾಮಕ್ಕೆ ಹೋಗುವಾಗ ಮುಂಚೆಯೇ ರಾಮಾಪೂರವೆಂಬ ಇನ್ನೊಂದು ಗ್ರಾಮ ಸಿಗುವುದು. ಅಲ್ಲಿಂದಲೇ ನಮಗೆ ಸುಬ್ಬಾಪೂರದ ಗಿರಿದುರ್ಗ ಕಾಣತೊಡಗುತ್ತದೆ. ಮದುವೆ ಗಂಡಿಗೆ ತೊಡಿಸಿದ ಭಾಷಿಂಗದಂತೆ ಗುಡ್ಡದ ಮೇಲೆ ನಿಂತ ಐತಿಹಾಸಿಕ ಗಢ ನಮ್ಮನ್ನು ಆಕರ್ಷಿಸುತ್ತದೆ.ಅದನ್ನು ನೋಡಿ ನನಗೆ ಖುಷಿಯ ಜೊತೆಗೆ ಚೂರು ಭಯವೂ ಆಗಿ ನನ್ನ ಗೆಳೆಯನಿಗೆ ಬೈಕ್ ಸ್ಟಾಪ್ ಮಾಡಲು ಹೇಳಿದೆ. "ದೋಸ್ತ ಆ ಗುಡ್ಡಾ ಹತ್ತಾಕ ಆಗತೈತಿಲೋ ನೋಡೋ?" ಎಂದೆ. ಆತನೂ ಮತ್ತೊಮ್ಮೆ ನೋಡಿ "ಲೇ ಬೈಕ ಹೋಗಾಕ ದಾರಿ ಇರತೈತಿ ನಡೀ" ಅಂದ. ನನಗ ಸ್ವಲ್ಪ ಧೈರ್ಯ ಬಂತು. "ಹೌದೋ! ಈ ವಯಸ್ಸಿನ್ಯಾಗ ಈ ಗುಡ್ಡಾ ಹತ್ತಲಿಲ್ಲ ಅಂದ್ರ ಇನ್ನ ಯಾವತ್ತೂ ಹತ್ತಲಿಕ್ಕೆ ಆಗೋದಿಲ್ಲ ನಡೆದಬಿಡು" ಎಂದು ಮತ್ತೆ ಪಯಣ ಮುಂದುವರೆಸಿದವು. ಸುಬ್ಬಾಪೂರಕೆ ಹೋಗಿ ಸ್ಥಳೀಯರಿಗೆ "ಕೋಟೆ ನೋಡ್ಬೇಕಲ್ರಿ" ಅಂತ ಹೇಳಿದ್ವಿ. ಅವರು "ಹಿಂಗ ಹೋಗ್ರಿ ಸರ್..ಎಲ್ಲಿಂದ ಬಂದೇರಿ? ನೀರ ಬಾಟಲ್ ತುಗೊಂಡ ಹೋಗ್ರಿ...

ಗಜಲ್ @ ಆನಂದ ಮಾಲಗಿತ್ತಿಮಠ

ಅವರಿಂದಿವರಿಗೆ ಇವರಿಂದವರಿಗೆ ನಡುವೆ ನಮಗೇನಿದೆ ಯಾರಿಂದ್ಯಾರಿಗೆ ಎಲ್ಲಿಂದೆಲ್ಲಿಗೆ ಸ್ವಾತಂತ್ರ್ಯವೇ ನಮಗೇನಿದೆ ಕೊಟ್ಟಿಹುದೇನೋ ಪಡೆದಿಹುದೇನೋ  ಮಾಯೆಯೊ ಹಳ್ಳಿಯಿಂದಿಲ್ಲಿಗೂ ನಾಯಕರಾದರೂ ಪ್ರಭುವೇ ನಮಗೇನಿದೆ ಬಾವುಟ ಹಿಡಿದಿಹ ಬಾಲವ ಬಡಿದಿಹ ಬಂಟರಿಗೇನೊ  ನೆಲದ ಒಡೆತನ ಬದಲಾದರೂ ಕರ್ಮವೇ ನಮಗೇನಿದೆ ಸೂಜಿಗೂ ತೆರಿಗೆಯಿತ್ತು ಸೂರಿಲ್ಲದೆ ತಿರುಗ್ಯಾರು ಉಳ್ಳವರೇ ಉತ್ಸವ ಮಾಡ್ಯಾರು ಶಂಭುವೇ ನಮಗೇನಿದೆ ಮತದಾರರಾದವರು ಅಥರ್ವನ ಕೇಳ್ಯಾರು ಸ್ವಾತಂತ್ರ್ಯದ ಸವಿಯಲಿ ಪಾಲು  ದೈವವೇ ನಮಗೇನಿದೆ  ಇದನ್ನೂ ಓದಿ ಸುಮ್ಮನಿರಲಾರದೇ ಬರಿ ಧರ್ಮವೆಂದೆ ಅಷ್ಟೇ

ಗಜಲ್@ ಆನಂದ ಮಾಲಗಿತ್ತಿಮಠ

ಸುಮ್ಮನಿರಲಾರದೆ ಬರಿ ಧರ್ಮವೆಂದೇ ಅಷ್ಟೇ ನಾನೇನೂ ಮಾಡಿರಲಿಲ್ಲ ಕೋಮುವಾದಿ ಎಂಬ ಬಿರುದು ಕೊಟ್ಟರಂದೇ ನಾನೇನೂ ಮಾಡಿರಲಿಲ್ಲ ತ್ರಾಸಿನಲಿ ಬರಿ ಪ್ರಾಸಗಳ ಜೋಡಿಸಿ, ಅಕ್ಷರಗಳ ಮಾಲೆ ಹೆಣೆದಿದ್ದೆ ಅಷ್ಟೇ ಕವಿಯೆಂದು ಕರೆದು ಪ್ರಶಸ್ತಿ ನೀಡಿಯೇ ಬಿಟ್ಟರಂದೇ ನಾನೇನೂ ಬರೆದಿರಲಿಲ್ಲ ಖಾದಿಯ ತೊಟ್ಟು ಓಣಿಯ ನಾಲ್ಕಾರು ಕದನಗಳನು ಬಗೆಹರಿಸಿದ್ದೆ ಅಷ್ಟೇ ರಾಜಕಾರಣಿಯೆಂದು ಜನ ಜೈಕಾರ ಹಾಕಿದರಂದೇ ನಾನೇನೂ ಮಾಡಿರಲಿಲ್ಲ ಪರದೆಯ ಮುಂದೆ ನಿಲ್ಲಿಸಿದಾಗ ಬರಿ ಬಾಯಿ ಬಡಿದೆ ಮೂಗನಂತೆ ಅಷ್ಟೇ ನಟಚಕ್ರವರ್ತಿಯೆಂದು ಪುತ್ಥಳಿಯನೇ ಮಾಡಿಟ್ಟರಂದೇ ನಾನೇನೂ ನಟಿಸಿರಲಿಲ್ಲ ಎದೆ ಎದೆ ಬಡಿದುಕೊಂಡು 'ಆನಂದ' ವಿರದೆ  ಹಸಿವು ಎಂದು ಕೂಗಿದೆ ಅಷ್ಟೇ ಅನ್ನದ ಬಟ್ಟಲ ಕಸಿದು  ಸಾಯಿ ಮಗನೇ ಅಂದರಂದೇ ನಾನೇನೂ ಬದುಕಲಿಲ್ಲ ಈ ಗಜಲ್ ನ್ನೂ ಓದಿ ನನಗೂ ದೇವರಿಗೂ ನಡುವೆ ಗೋಡೆ ಕಟ್ಟಿದಿರಿ, ಗುಡಿಯ ಹೆಸರಿನಲ್ಲಿ ಸಾಕಿ

ಗಜಲ್ @ ಆನಂದ ಮಾಲಗಿತ್ತಿಮಠ

ಸುಮ್ಮನೇ ಸಿಡುಕಬೇಡ ಮನದ ದಳಗಳು ಇನ್ನೂ ಮಿಡಿಯಾಗಿವೆ ತಪ್ಪುಗಳ ಎತ್ತಿ ತೋರಬೇಡ ಕೈ ಬೆರಳುಗಳು ಇನ್ನೂ ಮಿಡಿಯಾಗಿವೆ ಕಲ್ಪನೆಯ ಗುಹೆಯೊಳಗೆ ಕುಳಿತು ಬದುಕು ಬರಿಯ ಕತ್ತಲೆನಬೇಡ ಒಳಬಣ್ಣಗಳನು ಬೆತ್ತಲೆಗೊಳಿಸಲು ಕಿರಣಗಳು ಇನ್ನೂ ಮಿಡಿಯಾಗಿವೆ ದುರುಳರ ಕಾಮನೆಗಳ ಹಾಯಿದೋಣಿ ಮರುಳಾಗಿ ತೇಲುತಿರಲು ಅನ್ಯಾಯವೆನಬೇಡ ಮುಳುಗಿಸುವ ಅಲೆಗಳು ಇನ್ನೂ ಮಿಡಿಯಾಗಿವೆ ಮದಿರೆಯ ಅಮಲಿಗಿಂತ ಧರ್ಮದ ಅಮಲು ರುಚಿಯಾಗಿಹುದು ಸಾಕಿ ತಿಳಿಯದೆ ಇರಬೇಡ ನಿನಗೆ ತಿಳಿಸುವ ಜಿಹ್ವೆಗಳು ಇನ್ನೂ ಮಿಡಿಯಾಗಿವೆ. ಗಾಳಿಯ ಗೊಂಬೆಗಳ ಲೋಕದಲ್ಲಿ  ಚುಚ್ಚುವ ಸೂಜಿಗೇನು ಕಾಯಕ   ಮುರಿದೆಸೆದುಬಿಡು 'ಆನಂದ' ‌ಎಲ್ಲರ ಬಾಳುಗಳು ಇನ್ನೂ ಮಿಡಿಯಾಗಿವೆ ಈ ಗಜಲ್ ನ್ನೂ ಓದಿ ನನ್ನ ಮನೆಯ ಹಿತ್ತಲದ ಹೂವು ತತ್ತರಿಸಿ ಹೋಯಿತು

ಗಜಲ್ @ ಆನಂದ ಮಾಲಗಿತ್ತಿಮಠ

ನನಗೂ ದೇವರಿಗೂ ನಡುವೆ ಗೋಡೆ ಕಟ್ಟಿದಿರಿ ಗುಡಿಯ ಹೆಸರಿನಲಿ ಸಾಕಿ ಬಯಲಿನಲ್ಲಿಯೇ ಕೈಮುಗಿದು ಬಯಲಾಗಬಯಸಿದ್ದೆ ಕರ್ಪೂರದ ರೀತಿಯಲಿ ಸಾಕಿ ನನಗಿರುವ ಸ್ವಾತಂತ್ರ್ಯ ನನ್ನ ದೇವನಿಗೇಕಿಲ್ಲ ನರಳಬೇಕೇ‌ ಬಂಧನದಲಿ ಬಂದರೆ ಬರಲಿಬಿಡಿ ನನ್ನೊಂದಿಗೆ ಬಡವನ ಗುಡಿಸಲಿಗೂ ಚೆಂದದಲಿ ಸಾಕಿ ನನ್ನನೇಕೋ ಆಲಿಸನು ಮಂದಾದವೇ ಕರ್ಣಗಳು ಗಂಟೆಯ ಠೇಂಕಾರದಲಿ ಮಂದಾರ್ತಿಯ ಮಂದಾನಿಲಕೆ  ಮಾದೇವ ಸುಂದಾದನೆ  ಓಂಕಾರದಲಿ ಸಾಕಿ ಧನಕನಕಾದಿಗಳಿಗೆ ಗಾಳ ಹಾಕದ ಗರೀಬ್ ನನ್ನು ಗಾಳಿಯಾಗಿಸು ಕರುಣೆಯಲಿ ಎಲ್ಲ ಬಂಧನಗಳ ತೂರಿ ಆ ದೇವನ  ಸ್ಪರ್ಶಿಸಿ ಬರುವೆ ತುಡುಗಿನಲಿ ಸಾಕಿ ಇಂದಲ್ಲ ನಾಳೆ  ನನಗಾಗಿ ದೇವ ಹೊರಬಂದೇ ಬರುವನು ಜನಜಾತ್ರೆಯಲಿ ಗುಡಿಯಿಂದಾಗಲಿ, ಆನಂದನ‌ ದೇಹದಿಂದಾಗಲಿ ಬಲು ಸಂಭ್ರಮದಲಿ ಸಾಕಿ ಈ ಗಜಲ್ ನ್ನೂ ಓದಿ ನಿನ್ನ ಹೆರುವಾಗಲೂ ನನಗಿಷ್ಟು ನೋವಾಗಿರಲಿಲ್ಲ ಕಂದಾ