ಮುಗಿದ ಸಂಜೆಯ ಮುಗಿಲಿನ ಹಳದಿಯಂಚಿನ.... ಕಡಲ ಕೂಡುವ ಕೊನೆಯ ತಳದಿ ಮುಳುಗುವ ರವಿಯ ನಾಭಿಯಲಿ... ತಳೆಯುತಿದೆ ಬಿಳಚು ಹಾದಿ...!! ಹಾದಿಗುಂಟ ತೇಲಿಬರುತಿದೆ.. ಹೆಪ್ಪುಗಟ್ಟಿದ ನಿನ್ನ ನೆನಪುಗಳ ಹೊತ್ತ ಹೆಣದಂಥ ದೋಣಿ... ಕಪ್ಪಡರಿದ ಸಂಜೆ ಬಿಕ್ಕಳಿಸುತಿದೆ ಮಗು ಬಯಸಿದ ಬಂಜೆಯಂತೆ! ಯಾವ ಕಿಡಿಯು ಸೋಕಿಹುದು ಬೆರೆತ ಈ ಹೃದಯಗಳ ಪುಟ್ಟ ಗುಡಿಸಲು..? ಒಲವ ಕೋಟೆಯು ಸಿಡಿದ ರಭಸಕೆ, ಉರಿಯನಾಲಿಗೆ ಚಾಚಿದೆ ಗಗನಕೆ..!! ಸುಟ್ಟಗಾಯದ ದಟ್ಟಕಲೆಗಳು ಮುಗಿಲ ಕೆನ್ನೆಯ ನೆಟ್ಟಿವೆ.. ಭಾವ ಕಣ್ಣೀರ ಬಿಸಿಯ ಬುಗ್ಗೆ ಬಾಯಿನುಗ್ಗಿ ಬಿಕ್ಕಳಿಸಿದೆ...!! ಬೆಚ್ಚನೆಯ ಕನಸುಗಳ ಹುಚ್ಚಿನಾಟವು, ಎದೆಗೆ ಬೆಂಕಿ ಇಡುತಿದೆ.. ಹುಗಿದ ಪ್ರೀತಿ, ಎದೆಯ ಬಿಗಿದು ಭಾವತಂತಿ ಮೀಟುತಿದೆ,ಶೋಕಗೀತೆ ಹಾಡುತಿದೆ..!! ಯಾವ ಸುಳಿಯು ನುಸುಳಿ ಹಣಿಯಿತೋ ಇಂದು ತಿಳಿಯದಾಗಿದೆ... ಬೆನ್ನುಬೆನ್ನಿಗೆ ಅಳುವ ಕೊಡವಿ ಉಕ್ಕಿ ಬಿಕ್ಕಿ ಬರುತಿವೆ ಕಡಲಿನಲೆಗಳು, ಹಕ್ಕಿಗಳು ಹಾರಿಬಂದಿವೆ ದು:ಖ ಸಂತೈಸಲು...!! ✍🏽 ಸಿದ್ದು ನೇಸರಗಿ. (ಮೂಗಬಸವ) ಸಿ ಆರ್ ಪಿ ಆನಿಗೋಳ.🙏 ಮಿತ್ರರೇ ತಮ್ಮ ಓದಿನ ಪ್ರೀತಿಗೆ...ಮತ್ತೂಂದು ಕವಿತೆ🙏💐💐
EDUCATION | ENTERTAINMENT | INFOTAINMENT